ಹಿಟ್ಲರ್ ಆಡಳಿತ ದಲ್ಲಿರುವ ಹಾಸನ ಜಿಲ್ಲೆ ಯಲ್ಲಿ ಅಧಿಕಾರಿಗಳಿಗಿಲ್ಲ ಗೌರವ ಸಂವಿಧಾನ ಕ್ಕಿಲ್ಲ ಗೌರವ.?
31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಇಲ್ಲದ ಸಮಸ್ಯೆ, ಹಾಸನದ ಡಿಸಿ ಲತಾ ಕುಮಾರಿ ಅವರಿಗೇ ಯಾಕೆ ಟಾರ್ಗೆಟ್?

ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬ ಮಹಿಳಾ ಜಿಲ್ಲಾಧಿಕಾರಿಯನ್ನೇ ಪದೇಪದೇ ಗುರಿಯಾಗಿಸುವುದೇಕೆ? ಅವರ ವಿರುದ್ಧದ ಟೀಕೆಗಳ ಹಿಂದಿನ ಉದ್ದೇಶವೇನು?

ಕಳೆದ ತಿಂಗಳು ಎಚ್.ಡಿ. ರೇವಣ್ಣನವರು, ಈ ತಿಂಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು!

ಹಾಸನ ಜಿಲ್ಲೆಗೆ ಇನ್ನೂ ಎಂತಹ ಜಿಲ್ಲಾಧಿಕಾರಿ ಬೇಕು? ಯಾವುದೇ ಜಿಲ್ಲಾಧಿಕಾರಿ ಬಂದರೂ ಅವರಿಗೆ ಒತ್ತಡ, ಟಾರ್ಚರ್ ಮತ್ತು ಕಿರುಕುಳ ನೀಡುವುದೇ ನಿಮ್ಮ ರಾಜಕೀಯ ಸಂಸ್ಕೃತಿಯೇ?

ಕುಮಾರಸ್ವಾಮಿಯವರೇ, ಜಿಲ್ಲಾಧಿಕಾರಿಗಳು ನಿಮ್ಮ ರಾಜಕೀಯ ಇಚ್ಛೆಗೆ ತಕ್ಕಂತೆ ಕೆಲಸ ಮಾಡುವವರಲ್ಲ. ಅವರು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು.

ಒಬ್ಬ ಮಹಿಳಾ ಅಧಿಕಾರಿಯ ಆತ್ಮಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ದಯವಿಟ್ಟು ನಿಲ್ಲಿಸಿ . ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರುವುದನ್ನು ನಿಲ್ಲಿಸಿ. ಟೀಕೆ ಮಾಡುವ ಮೊದಲು ನಿಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಿ. ಮಾನ್ಯ ಕುಮಾರಸ್ವಾಮಿಯವರೇ
ಇದು ಸಂವಿಧಾನದ ದೇಶ, ಯಾರೊಬ್ಬರ ವೈಯಕ್ತಿಕ ಸಾಮ್ರಾಜ್ಯವಲ್ಲ!

ಅಧಿಕಾರ, ರಾಜಕೀಯ ಪ್ರಭಾವ ಮತ್ತು ಕುಟುಂಬದ ಪ್ರಾಬಲ್ಯವನ್ನು ಬಳಸಿಕೊಂಡು ಅಧಿಕಾರಿಗಳ ಮೇಲೆ ದೌರ್ಜನ್ಯ ಹಾಗೂ ಒತ್ತಡ ಹೇರುವುದನ್ನು ನಿಲ್ಲಿಸಿ.

ಮಹಿಳಾ ಅಧಿಕಾರಿಗಳ ಆತ್ಮಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಬೇಡ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಮರೆಯಬೇಡಿ.
ಮಾಜಿ ಮುಖ್ಯಮಂತ್ರಿಗಳಾಗಿದ್ದವರು ನೀವು , ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಅಸಮಂಜಸ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ?

ಹಿರಿಯ ಸ್ಥಾನದಲ್ಲಿರುವವರು ಮಾತನಾಡುವ ಪ್ರತಿಯೊಂದು ಮಾತಿಗೂ ಘನತೆ ಇರಬೇಕು. ಟೀಕೆ ಮಾಡುವ ಮೊದಲು ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಮಾತನಾಡುವುದು ಅಗತ್ಯ.

ಇದು ಪ್ರಜಾಪ್ರಭುತ್ವದ ದೇಶ. ಇಲ್ಲಿ ಅಧಿಕಾರಕ್ಕಿಂತ ಸಂವಿಧಾನ ಮತ್ತು ಕಾನೂನಿಗೆ ಹೆಚ್ಚಿನ ಗೌರವವಿದೆ.