ಹೊಗೆನೆಕಲ್ ಬಳಿ ಈಜಲು ತೆರಳಿದ್ದ ವ್ಯಕ್ತಿ ನೀರು ಪಾಲು

ಹನೂರು: ತಾಲೂಕಿನ ಗೋಪಿನಾತಮ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಕೊಟ್ಟಯಂ ನ ಸಮೀಪದಲ್ಲಿರುವ ಹೊಗೆನೆಕಲ್ ಕಾವೇರಿ ನದಿಯಲ್ಲಿ ಈಜಲೂ ಹೋಗಿದ್ದ ಐವರಲ್ಲಿ ಒರ್ವ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ತಾಲ್ಲೂಕಿನ ಆನೆಹೊಲ,ಒಡೆಯರ ಪಾಳ್ಯ,ಮತ್ತು ಕೋಣನಕೆರೆ ಗ್ರಾಮಗಳಿಂದ 5 ಜನರು ಕೆಲಸಕ್ಕೆಂದು ಪೆನ್ನಗರಂ ಗೆ ಹೋಗಿದ್ದರು,ಅಲ್ಲಿಂದ ಕೆಲಸ ಮುಗಿಸಿ ವಾಪಸ್ಸು ಬರುವ ವೇಳೆ ಮಾರಿಕೊಟ್ಟಯಂ ನ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದಾರೆ ಎನ್ನಲಾಗಿದೆ,

ಈ ವೇಳೆ ಅವರಲ್ಲಿ ಶಿವು (22) ವರ್ಷ ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.ಈತ ಒಡೆಯರಪಾಳ್ಯ ಗ್ರಾಮದವನಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದು ಸೋಲಿಗ ಜನಾಂಗಕ್ಕೆ ಸೇರಿರುತ್ತಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಮಹದೇಶ್ವರ ಬೆಟ್ಟ ಪೋಲೀಸರು ಶವವನ್ನು ನದಿಯಿಂದ ಹೊರಕ್ಕೆ ತೆಗೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.