*ಜಗಜೀವನರಾಮ ಮತ್ತು ಬಾಬಾಸಾಹೇಬರ ಜಯಂತಿಯನ್ನು ಜಂಟಿಯಾಗಿ ಮಾಡುವುದು ಬದ್ಧತೆಯಿಲ್ಲದ ಭಂಡಾಟ ಆಗುತ್ತದೆ.*

1. ಜಗಜೀವನ ರಾಮ ಒಬ್ಬ ರಾಜಕೀಯ ನಾಯಕರಾದರೆ, ಬಾಬಾಸಾಹೇಬರು 32ಪದವಿಗಳನ್ನು ಪಡೆದ ಹಾಗೂ 53 ವಿಷಯಗಳಲ್ಲಿ ಆಳವಾಗಿ ಅಧ್ಯಯನ ಮಾಡಿರುವ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ. ಅರ್ಥ ಶಾಸ್ತ್ರಜ್ಞ, ಸಮಾಜ ವಿಜ್ಞಾನಿ ಆಗಿದ್ದಾರೆ.
2. 1919ರಲ್ಲಿ ಸೌಥ ಬ್ರೂ ಕಮೀಷನ್ ಬಂದಾಗ ಬಾಬಾಸಾಹೇಬರು ಶೋಷಿತ ಸಮಾಜದ ಪ್ರಾತಿನಿಧ್ಯತೆಗಾಗಿ ಲಿಖಿತ ಮನವಿ ಸಲ್ಲಿಸಿದರು ಹಾಗೂ ಸಾಕ್ಷಿ ನುಡಿದರು. ಈ ಸಂದರ್ಭದಲ್ಲಿ ಜಗಜೀವನ್ ರಾಮನರವರ ವಯಸ್ಸು ಕೇವಲ 11 ವರ್ಷವಿತ್ತು (ಜಗಜೀವನ ರಾಮರವರ ಜನ್ಮ ದಿನಾಂಕ:5.3.1908) ಹೀಗಿದ್ದಾಗ ಈತ ಬಾಬಾಸಾಹೇಬರ ಜೊತೆಗೆ ಕೆಲಸ ಮಾಡಿದ್ದಾರೆ ಎಂದು ಪುಂಗುವುದು ಅವಿವೇಕಿತನವಾಗುತ್ತದೆ

3. 1930ರಲ್ಲಿ ಬಾಬಾಸಾಹೇಬರು ಪ್ರಥಮ ದುಂಡು ಮೇಜಿನ ಸಭೆಗೆ ಹೋದಾಗ ಜಗಜೀವನರಾಮ ವಯಸ್ಸು 20. ಇತ್ತು. ಆಗ ಅವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದರು. ಇಂತಹ ಹುಡುಗನನ್ನು ಬಾಬಾಸಾಹೇಬರ ಜೊತೆಗೆ ಹೋಲಿಕೆ ಮಾಡುವುದು ಸರಿಯಾದ ಪದ್ಧತಿಯಲ್ಲ.

4. 1932ರ ಸಪ್ಟೆಂಬರ 24 ಪೂನಾ ಒಪ್ಪಂದವಾಯಿತು. ಇದರ ಆಧಾರದ ಮೇಲೆ 1935ರ ಪ್ರಥಮ ಭಾರತ ಕಾಯ್ದೆ ಜಾರಿಗೆ ಬಂದಿತ್ತು. ಈ ಕಾಯ್ದೆಯಡಿಯಲ್ಲಿ ಭಾರತದಲ್ಲಿ 1937ರಲ್ಲಿ ಪ್ರಾಂತೀಯ ಶಾಸಕಾಂಗ ಸಭೆ ಚುನಾವಣೆಗಳು ಜರುಗಿದವು. ಈ ಚುನಾವಣೆಯಲ್ಲಿ ಜಗಜೀವನರಾಮರವರು ಸ್ಪಧರ್ಿಸಿದ್ದರು. ಇದರರ್ಥ ಬಾಬಾಸಾಹೇಬರು ಕೊಟ್ಟ ರಾಜಕೀಯ ಮೀಲಸಾತಿಯು ಮೊದಲ ಫಲಾನುಭವಿ ಜಗಜೀವನರಾಮರವರು. ಮೊದಲ ಫಲಾನುಭವಿಯನ್ನು ಬಾಬಾಸಾಹೇಬರ ಸರಿ ಸಮಾನರಾಗಿ ಪರಿಗಣಿಸುವುದು ಸರಿಯಲ್ಲ.

5. ಡಾ.ಅಂಬೇಡ್ಕರ್ರವರು ಭಾರತದ ಸಮಸ್ತ ಶೋಷಿತರ ಹಕ್ಕಿಗಾಗಿ ನಡೆಸಿರುವ ದೀರ್ಘ ಕಾಲದ ಚಳುವಳಿಯಲ್ಲಿ ಜಗಜೀವನರಾಮ ಯಾವತ್ತೂ ಎಂದೂ ಕೈಜೊಡಸಲಿಲ್ಲ. ಬದಲಾಗಿ ಗಾಂಧಿಯ ಹರಿಜನ ಸೇವಕನಾಗಿ ದುಡಿಯುತ್ತಾ ಬಾಬಾಸಾಹೆಬರ ಚಳುವಳಿಗೆ ಬಾಧೆಯನ್ನುಂಟು ಮಾಡುತ್ತಿದ್ದನು. ಇದು ಚಾರಿತ್ರೀಕ ಸತ್ಯ. ಇಂತಹ ವ್ಯಕ್ತಿಯನ್ನು ಬಾಬಾಸಾಹೇಬರಿಗೆ ಸರಿ ಸಮಾನ ಎಂದು ಬಿಂಬಿಸುವುದು ಮೂರ್ಖತನವಾಗುತ್ತದೆ.

6. 14.10.1956ರಂದು ಬಾಬಾಸಾಹೇಬರು ಐದು ಲಕ್ಷ ಉಪಾಸಕರೊಂದಿಗೆ ಬೌದ್ಧ ಧಮ್ಮ ಸ್ವೀಕಾರ ಮಾಡಿದಾಗ ಜಗಜೀವನರಾಮ ಅದನ್ನು ವಿರೋಧಿಸುತ್ತಾ:. ಇಂಡಿಯನ್ ಎಕ್ಷಪ್ರೆಸ್ ಪತ್ರಿಕೆಯಲ್ಲಿ: ಹೇಡಿಗಳು (ಕವರ್ಡಸ್) ಮಾತ್ರ ಹಿಂದೂ ಧರ್ಮ ತ್ಯಜಿಸುತ್ತಾರೆ (ಡಿಸೆಂಬರ್-14) ಎಂದು ಇಡೀ ಐದು ಲಕ್ಷ ಜನರನ್ನು ಹೀಚಿಾಳಿಸುತ್ತಾ ತುಚ್ಚವಾಗಿ ಪತ್ರಿಕಾ ಹೇಳಿಕೆ ಕೊಟ್ಟಿರುವನು ಇಂತಹ ವ್ಯಕ್ತಿ ಬಾಬಾಸಾಹೇಬರ ಸಮಾನ ಗೌರವಕ್ಕೆ ಭಾಜನಾಗಲು ಸಾಧ್ಯವೇ ?

7. 9.4.1946ರಂದು ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಾಗ ಬಾಬಾಸಾಹೇಬರು ಪ್ರತ್ಯೇಕ ಮತಕ್ಷೇತ್ರ ಮತ್ತು ದ್ವೀಮತಾಧಿಕಾರದ ಹಕ್ಕನ್ನು ಕೊಡಲು ಒತ್ತಾಯಿಸುತ್ತಾರೆ. ಆದರೆ ಜಗಜೀವನರಾಮಮ, ಪೃಥ್ವಿಸಿಂಗ್ ಮತ್ತು ಆಜಾದ್ ಎಲ್ಲರೂ ಸೇರಿ 'ಡಿಪ್ರೆಸ್ಡ್ ಕ್ಯಾಷ್ಟ್ ' ಪರವಾಗಿ ಜಂಟಿ ಮತದಾನ ಪದ್ಧತಿ ಬೇಕೆ ವಿನಃ ನಮಗೆ ಪ್ರತ್ಯೇಕ ಮತಕ್ಷೇತ್ರ ಮತ್ತು ದ್ವಿಮತಾಧಿಕಾರ ಬೇಡ (ವಿಜಯಮಾನಕರ್-ಪೂನಾಪ್ಯಾಕ್ಟ್) ಎಂದು ಪ್ರತಿವಾದಿಯಾಗಿ ಹಕ್ಕೋತ್ತಾಯ ಮಾಡುತ್ತಾರೆ. ಶೋಷಿತರ ಹಕ್ಕಿನ ವಿರುದ್ಧ ಹೋರಾಡಿರುವ ಜಗಜೀವನರಾಮರನ್ನು ಬಾಬಾಸಾಹೇಬರ ಜೊತೆಗೆ ತುಲನೇ ಮಾಡುವುದು ಮೂರ್ಖತನವಾಗುತ್ತದೆ.

8. 19.06.1946ರಂದು ಮೊಹ್ಮದಲಿ ಜಿನ್ನಾ ಗವರ್ನರ್ ಕೌನ್ಸಿಲ್ಗೆ ಪತ್ರ ಬರೆದು ನಡುಗಾಲ ಸರಕಾರದಲ್ಲಿ ಜಗಜೀವನ ರಾಮಗೆ ದಲಿತರ ಪ್ರತಿನಿಧಿ ಎಂದು ಪರಿಭಾವಿಸಲು ನಮ್ಮ ವಿರೋಧವಿದೆ, ಕಾರಣ 'ಡಿಪ್ರೇಸ್ಡ್ ಕ್ಲಾಸ್ ಸಂಘಟನೆ ಕಾಂಗ್ರೇಸ್ ಪ್ರಾತಿನಿಧ್ಯತೆ ಹೊಂದಿದೆ. ಇದು ಹಿಸ್ ಮಾಷ್ಟರ್ ವೈಸ್ ಸಂಘಟನೆಯಾಗಿದೆ. ಅದು ಅಸ್ಪೃಶ್ಯರ ನೈಜ ಪ್ರತಿನಿಧಿ ಅಲ್ಲ. (ಟ್ರಾನ್ಸ್ಫರ್ ಆಫ್ ಪವರ್ ಪು: 775) ಅದಕ್ಕಾಗಿ ನಾನು ವಿರೋಧಿಸುತ್ತೇನೆ ಎಂದು ಹೇಳುತ್ತಾರೆ. ಇಂತಹ ಶೋಷಿತರ ಹಕ್ಕುಗಳ ವಿರೋಧಿ ವ್ಯಕ್ತಿ ಬಾಬಾಸಾಹೇಬರ ಸಮಾನ ಗೌರವ ಪಡೆಯಲು ಅರ್ಹರಿದ್ದಾರೆಯೇ? ಯೋಚಿಸಿ.

9. 1946 ನಡುಗಾಲ ಸರಕಾರದಲ್ಲಿ ಕಾಮರ್ಿಕ ಸಚಿವರಾಗಿದ್ದವರು ಜಗಜೀವನರಾಮರವರು. ಸಮ ಕಾಲೀನ ಸಂದರ್ಭದಲ್ಲಿ (1942ರಲ್ಲಿ) ಬಾಬಾಸಾಹೇಬರು ಅಸಸ್ಪೃಶ್ಯರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಿ ಕೊಟ್ಟಿದ್ದರು. ತದನoತರ 1946ರ ನಡುಗಾಲ ಸರಕಾರದಲ್ಲಿ ಸರ್ದಾರ್ ಪಟೇಲರ ಒತ್ತಾಸೆಗೆ ಮಣಿದ ನೆಹರು ಅಸ್ಪೃಶ್ಯರಿಗೆ ಉದ್ಯೋಗದಲ್ಲಿನ ಮೀಸಲಾತಿ ತೆಗೆದು ಹಾಕಿದರು. ಆಗ ಬಾಬಾಸಾಹೇಬರು ಜಗಜೀವನರಾಮಗೆ ಇದನ್ನು ವಿರೋಧಿಸಲು ಹೇಳಿದರು. ಆದರೆ ಆತ ಕೇಳಲಿಲ್ಲ. ಆದರೆ ಆಂದ್ರಪ್ರದೇಶದ ನಾಗಪ್ಪನವರಿಗೆ ಹೇಳಿದರು. ಆಗ ನಾಗಪ್ಪನವರು ವಿರೋಧ ಮಾಡಿದ್ದಕ್ಕೆ ನಾಗಪ್ಪನವರನ್ನು ಜಗಜೀವನರಾಮರೆವರು ಪಕ್ಷದಿಂದ ಉಚ್ಛಾಟನೆ ಮಾಡಿಸಿದನು. ಇಂತಹ ರಾಜಕಾರಣಿಯನ್ನು ವಿಶ್ವಜ್ಞಾನಿ ಬಾಬಾಸಾಹೇಬರ ಜೊತೆಗೆ ಗೌರವಿಸುವುದು ಉಚಿತವೇ ?

10. 1951ರಲ್ಲಿ ಬಿಹಾರದ ಪಟ್ನಾದಲ್ಲಿ ಆರ್.ಎಲ್.ಚಂದಾಪುರಿ ನೇತೃತ್ವದಲ್ಲಿ ಓಬಿಸಿ ಮಹಾ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ಈ ಸಮ್ಮೆಳನದಲ್ಲಿ ಬಾಬಾಸಾಹೇಬರು ವಿಚಾರ ಮಾಮಡನೆ ಮಾಡುವವರಿರುತ್ತಾರೆ. ಈ ಸಮ್ಮೆಳನ ಸುಲಲಿತವಾಗಿ ನಡೆದರೆ, ಕಾಂಗ್ರೇಸ್ ಪಕ್ಷವು ಡ್ಯಾಮೇಜ್ ಆಗುತ್ತದೆ ಎಂದು ಕಾಂಗ್ರೇಸ್ನವರು ಮನಗಾಣುತ್ತಾರೆ. ಈ ಸಮ್ಮೇಳನವನ್ನು ತಡೆಗಟ್ಟುವ ಜವಾಬ್ದಾರಿಯನ್ನು ಜಗಜೀವನ್ ರಾಮ ವಹಿಸಲಾಯಿತು. ಆಗ ಜಗಜೀವನ ರಾಮರವರು ತನ್ನ ಸಹಚರನಾದ ಭೋಲೆ ಪಾಸ್ವಾನ್ ಶಾಸ್ತ್ರಿಗೆ ಸುಫಾರಿ ಕೊಟ್ಟು ಸದರಿ ಸಭೆಯಲ್ಲಿ ಕಲ್ಲು ತೂರಾಟ ಮಾಡಿಸಿ ಗದ್ದಲ್ ಎಬ್ಬಿಸಲು ನಿರ್ದೇಶನ ನೀಡಿದನು. ಅದರಿಂದ ಪಾಸ್ವಾನ್ ಕಾರ್ಯ ಪ್ರವರ್ತನಾಗಿ ಕಲ್ಲು ತೂರಾಟ ಮಾಡಿಸುತ್ತಾನೆ. ಇದರ ಯಶಸ್ವಿಗೆ ಕಾರಣನಾದ ಭೋಲೆ ಪಾಸ್ವಾನ್ ಶಾಸ್ತ್ರಿಗೆ ಕಾಂಗ್ರೇಸ್ ಪಕ್ಷವು ನಂತರ (22.3.1968-29.6.1968; 100ದಿನ) ಮುಖ್ಯ ಮಂತ್ರಿ ಮಾಡಿದರು. ಇಂತಹ ವ್ಯಕ್ತಿಗಳು ಬಾಬಾಸಾಹೇಬರಿಗೆ ಸಮಾನ ಆಗಲು ಸಾಧ್ಯವೇ?

11. ಇಂತಹ ರಾಜಕಾರಣಿಯನ್ನು ಬಾಬಾಸಾಹೇಬರೊಂದಿಗೆ ಸಮಾನವಾಗಿ ಗೌರವ ಕೊಡಬೇಕು ಎನ್ನುವುದು ಅವಿವೇಕದ, ಅತೀರೇಕದ, ಮೂರ್ಖತನದ ಮತ್ತು ಉದ್ಧಟತನದ ಪ್ರತಿಪಾದನೆಯಾಗುತ್ತದೆ. ಅದಕ್ಕಾಗಿ ಜಗಜೀವನ ರಾಮ ಜಯಂತಿಯನ್ನು ಬಾಬಾಸಾಹೇಬರ ಜಯಂತಿ ಜೊತೆಗೆ ಮಾಡಬಾರದೆಂದು ಹಾಗೂ ಮಾಡಗೊಡ ಬಾರದೆoದು ಛಲವಾದಿ, ಹೊಲೆಯ, ಬಲಗೈ ಬಂಧುಗಳಲ್ಲಿ ಪ್ರಾರ್ಥಿಸುತ್ತೇನೆ.

ಕ್ರಾಂತಿಕಾರಿ ಜೈ ಭೀಮ
ನಿಮ್ಮ ಬಲಗೈ ಬಂಧು