ನಮ್ಮ ಹನೂರ್ ತಾಲ್ಲೂಕಿನ ಹೆಮ್ಮೆ, ಹನೂರುನಲ್ಲಿ ಜನಿಸಿ ಬೆಳೆದ ಹಾಗೂ ಹನೂರ್ ಕ್ರಿಸ್ತರಾಜ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶ್ರೀ ರಾಜೇಶ್ ಆರ್, ಖ್ಯಾತ ವ್ಯಾಪಾರಿ ಶ್ರೀ ಜಂಬಣ್ಣ (ರಾಜಶೇಖರ್ ಬಿ ಎಸ್ )ಅವರ ಪುತ್ರರು, 2025–2026ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ರಾಜೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಸಮಾಜ ಸೇವೆಯಲ್ಲಿ ಇದೇ ರೀತಿಯ ಗಮನಾರ್ಹ ಸೇವೆಯನ್ನು ಮುಂದುವರಿಸಲಿ. ದೇವರು ನಿಮಗೆ ಇನ್ನಷ್ಟು ಶಕ್ತಿ ಮತ್ತು ಯಶಸ್ಸು ನೀಡಲಿ
ಪ್ರಸ್ತುತ ರಾಜೇಶ್ ಆರ್ ಅವರು ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ (DPI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೈಬರ್ ಕ್ರೈಂ ತನಿಖಾ ಕ್ಷೇತ್ರದಲ್ಲಿ 8 ವರ್ಷಗಳ ಅನುಭವ ಹೊಂದಿದ್ದು, ಕ್ರಿಪ್ಟೋಕರೆನ್ಸಿ ಸೀಜರ್ ಮತ್ತು ಡಿಜಿಟಲ್ ಆಸ್ತಿ ವಶಪಡಿಸಿಕೊಳ್ಳುವ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
ರಾಜ್ಯ ಮಟ್ಟದ ಪ್ರಮುಖ ಎಸ್‌ಐಟಿ ಪ್ರಕರಣಗಳಲ್ಲಿಯೂ ಭಾಗವಹಿಸಿ, ಹಲವು ಮಹತ್ವದ ತನಿಖೆಗಳಲ್ಲಿ ತಮ್ಮ ವಿಶೇಷ ಜ್ಞಾನ ಮತ್ತು ನಿಷ್ಠೆಯಿಂದ ಮಹತ್ವದ ಕೊಡುಗೆ ನೀಡಿದ್ದಾರೆ.
ನಿಮ್ಮ ಸಮರ್ಪಣೆ, ಪರಿಶ್ರಮ ಮತ್ತು ಸಮಾಜದತ್ತ ಇರುವ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ.

