ಸಕ್ಕರೆನಾಡು : ಮಳವಳ್ಳಿ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಸೋಮವಾರ ಹಿಂದುಳಿದ ವರ್ಗಗಳ ನಿಗಮ ವತಿಯಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕಾರುಗಳು ವಿತರಣೆ ಹಾಗೂ ಮಹಿಳೆಯಾರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿ ನಂತರ ಮಾತನಾಡಿದರು .
ನಮ್ಮ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ರವರು ಜನರಿಗೆ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಯೋಜನೆಗಳನ್ನು ಸಮರ್ಪಕವಾಗಿ ನಮ್ಮ ಸರ್ಕಾರ ನೀಡುತ್ತಿದ್ದೆ ಮತ್ತು ಜೊತೆಗೆ ನಾಲಾ ಆಧುನೀಕರಣ , ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಪೂರೈಕೆ , ಇನ್ನು ಆರು ತಿಂಗಳ ಒಳಗಾಗಿ ಶುದ್ಧ ಕಾವೇರಿ ನೀರನ್ನು ಪ್ರತಿ ಮನೆಗೆ ತಲುಪಿಸುವತ್ತೆ ಯೋಜನೆಯ ತಂದಿದ್ದೇವೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಅನುದಾನವನ್ನು ಮಳವಳ್ಳಿ ಕ್ಷೇತ್ರಕ್ಕೆ ತರುತ್ತಿದ್ದೇವೆ ಎಂದರು . 6 ನಿಗಮಗಳನ್ನು ಸ್ಥಾಪಿಸಿ ಸಮರ್ಪಕವಾಗಿ ಅನುದಾನವನ್ನು
ಸ್ವಾವಲಂಭ ಸಾರಥಿ ನೀಡುತ್ತಿದೆ . ಮುಂದಿನ ದಿನಗಳಲ್ಲಿ ಎಲ್ಲ ನಿಗಮಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುವಂತೆ ಮಾಡಲಾಗುವುದು . ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಳವಳ್ಳಿಗೆ ಕರೆಸಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ , ಸವಲತ್ತುಗಳ ವಿತರಣೆ ಹಾಗೂ ನಿವೇಶನ ಹಂಚಿಕೆ ಮಾಡಿಸಲಾಗುವುದು ಎಂದುರು . ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್ , ಮನ್‌ಮುಲ್ಉಪಾಧ್ಯಕ್ಷ.ಡಿಕೃಷ್ಣಗೌಡ.ನಿರ್ದೇಶಕರಾದ ವಿಶ್ವಾಸ್ , ಇಒ ಎಚ್ . ಜಿ.ಶ್ರೀನಿವಾಸ್ , ಜಿಲ್ಲಾ ಪಂಚಾಯತ್ ಸಹಾಯಕ ಅಭಿಯಂತರರು ಅಪ್ಪಣ್ಣ ಬೋವಿ.ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು , ಕೆ.ಜೆ. ದೇವರಾಜು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು , ಸಿ ಮಾದು . ವೇದಮೂರ್ತಿ . ಕಿರಣ್ ಶಂಕರ್ . ಶಿವಮೂರ್ತಿ.ಮಹೇಶ . ಸಂತೋಷ್ ಕುಮಾರ್ . ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬೋರೇಗೌಡ ಹಾಗೂ ಇತರರಿದ್ದರು .

