ಮಂಡ್ಯ ನಗರದಲ್ಲಿರುವ ಜಿಲ್ಲಾ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ
ಸಂಘದ ಕಚೇರಿ ಸಮೀಪವಿರು ಅರಳಿಕಟ್ಟೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದ ಶ್ರೀರಾಮನವಮಿ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ
ನಡೆಯಿತು.ಬಳಿಕ ಮಾತನಾಡಿದ ಜಿಲ್ಲಾ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಂ.ಚಿಕ್ಕುಚ್ಚಯ್ಯ, ಶ್ರೀರಾಮನ ಆದರ್ಶಗುಣಗಳು ಇಂದಿನ ಯುವಕರಿಗೆ ಅತ್ಯವಶ್ಯಕ, ಆದರ್ಶಗುಣವಿಲ್ಲ ಮನುಷ್ಯ ಮಾನವನಾಗಿರಲಾರ ಎಂದು ತಿಳಿಸಿದರು. ಆಧ್ಯಾತ್ಮಿಕ ಶ್ರದ್ಧೆ ಮೈಗೂಡಿಸಿಕೊಳ್ಳಬೇಕು, ಇನ್ನೊಬ್ಬರಿಗೆ ನೆರವಾಗಬೇಕು, ಶ್ರೀರಾಮ-
ಲಕ್ಷ ಮಣರ ಸೋದರತ್ವ ಭಾವನೆ ಎಲ್ಲರಲ್ಲೂ ಬರಬೇಕು, ಮನ ಮನೆಗಳಲ್ಲೂ ಅಣ್ಣ-ತಮ್ಮಂದಿರು ಒಮ್ಮತದಿಂದ ಜೀವನ ನಡೆಸಲಿ ಎನ್ನುವುದು ನಮ್ಮ ಭಾವನೆ
ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನಾಗರೀಕರಿಗೆ ರಸಾಯನ ಮಜ್ಜಿಗೆ-ಪಾನಕ ಕೊಸಂಬರಿ ವಿತರಿಸಿದರು.ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ
ಚಿಕ್ಕನಾಗೇಗೌಡ, ಶ್ರೀನಿವಾಸ್, ನಾಗರಾಜ್, ಪುಟ್ಟಸ್ವಾಮಿ, ಚಿಕ್ಕಚನ್ನಯ್ಯ, ಮಾದೇಗೌಡ,
ನಿಂಗೇಗೌಡ, ಕೃಷ್ಣಗೌಡ, ನಾಗರಾಜ್, ಬಸವರಾಜ್ ಮತ್ತಿತರಿದ್ದರು.