ಸಕ್ಕರೆನಾಡು: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ
ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆನ್‌ಲೈನ್ ಕಂಪನಿಗಳು ಕೇವಲ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಮೂಲಕ ಹೈನುಗಾರಿಕೆ ನಂಬಿದ ಲಕ್ಷಾಂತರ ರೈತರ
ಬದುಕಿನ ಜೊತೆ ಆಟವಾಡುತ್ತಿವೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ
ವ್ಯಕ್ತಪಡಿಸಿದರು.
ರಾಜ್ಯದ ಆರ್ಥಿಕ ಬೆನ್ನೆಲುಬಾಗಿರುವ ಹೈನುಗಾರಿಕೆ ಇಂದು ಸಂಕಷ್ಟಕ್ಕೆ ಸಿಲುಕಿದೆ.
ಪ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ವಾಲ್-ಮಾರ್ಟ್ನನಂತಹ ಬಹುರಾಷ್ಟ್ರೀಯ
ಕಂಪನಿಗಳು ಮಾರುಕಟ್ಟೆಯಲ್ಲಿ ಅನ್ಯಾಯದ ಪೈಪೋಟಿ ನಡೆಸುತ್ತಿವೆ, ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುವ ಮೂಲಕ ಈ ಕಂಪನಿಗಳು ನಂದಿನಿಯಂತಹ ಸಹಕಾರಿ ಸಂಸ್ಥೆಗಳನ್ನು ನಾಶ ಮಾಡಲು ಸಂಚು ರೂಪಿಸುತ್ತಿವೆ ಎಂಬುದು ರೈತರ ಗಂಭೀರ ಆರೋಪ ಮಾಡಿದರು.
ಆನ್‌ಲೈನ್‌ ಕಂಪನಿಗಳ ಅನ್ಯಾಯದ ಮಾರಾಟ ತಂತ್ರಗಳನ್ನು ಕೂಡಲೇ ತಡೆಯಬೇಕು ಸ್ವಾಮಿನಾಥನ್ ವರದಿಯಂತೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 50 ರೂಪಾಯಿ ಬೆಲೆ
ನಿಗದಿಪಡಿಸಬೇಕು, ಗಗನಕ್ಕೇರಿರುವ ಪಶು ಆಹಾರದ ಬೆಲೆಗಳನ್ನು ಸರ್ಕಾರ
ನಿಯಂತ್ರಿಸಬೇಕು, ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ
ರದ್ದುಗೊಳಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಎನ್.ಎಲ್.ಭರತ್ ರಾಜ್, ಮಹದೇವು
, ಗುರುಸ್ವಾಮಿ, ಸಿದ್ದೇಗೌಡ , ಗಣೇಶ್, ನಾಗಮಣಿ, ಪದ್ಮ, ಶ್ರೀನಿವಾಸ್,
ಮೂರ್ತಿ, ವಿಜಯ್ ಕುಮಾರ್, ಪರಿಮಳ ಸೇರಿದಂತೆ ಇತರರು ಇದ್ದರು.